ದಿನದ ಅಪರಾಧಗಳ ಪಕ್ಷನೋಟ 27ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:26.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶ್‌ ಬಿನ್ ಚಿನ್ನಪ್ಪ, ಮೂತನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೂ ಹಾಗೂ ಮುತ್ತಮ್ಮ, ಮುನಿಸ್ವಾಮಿ ಮತ್ತು ಲಕ್ಷ್ಮಮ್ಮ ರವರಿಗೂ ಜಮೀನು & ಮನೆಯ ವಿಚಾರದಲ್ಲಿ ವಿವಾದವಿದ್ದು, ದಿನಾಂಕ 25.02.2020 ರಂದು ಸಂಜೆ 5.00 ಗಂಟೆಯಲ್ಲಿ ದೂರುದಾರರು ಹಳೆಯ ಮನೆಯ ಬಳಿ ಹೋದಾಗ, ಮುತ್ತಮ್ಮ, ಮುನಿಸ್ವಾಮಿ, ಲಕ್ಷ್ಮಮ್ಮ ರವರು ಮನೆಯ ಬಳಿ ಬರಬೇಡ ಎಂದು ಕೆಟ್ಟ ಮಾತುಗಳಿಂದ ಬೈದ್ದು ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.

– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಭಾರತಿ ಕೊಂ ಕೃಷ್ಣಮೂರ್ತಿ, ಕರಿಮಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 01.05.2017 ರಂದು ಕೃಷ್ಣಮೂರ್ತಿ ರವರನ್ನು ಮದುವೆಯಾಗಿದ್ದು, ಸುಮಾರು ಏಳು ತಿಂಗಳಿನಿಂದ ಕೃಷ್ಣಮೂರ್ತಿ ರವರು ಮನೆಗೆ ಬರದೇ ಟೇಕಲ್ ಗ್ರಾಮದ ಸಾಕಮ್ಮನ ಮಗಳಾದ ಶೈಲ ಎಂಬಾಕೆಯನ್ನು ಮದುವೆ ಮಾಡಿಕೊಂಡು ದೂರುದಾರರಿಗೆ ಮೋಸ ಮಾಡಿರುತ್ತಾರೆ.

Leave a Reply

Your email address will not be published. Required fields are marked *