ದಿನದ ಅಪರಾಧಗಳ ಪಕ್ಷನೋಟ 05ನೇ ಡಿಸೆಂಬರ್‌ 2019

– ಸಾಧಾರಣ ಕಳ್ಳತನ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರೂಪ ಕೊಂ ಪುರುಷೋತ್ತಮ್‌, ಕದರೀಪುರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದ್ವಿಚಕ್ರ ವಾಹನ SUZUKI ACCESS 125 NO- KA 05 KN 6547 ರಲ್ಲಿ  ದಿನಾಂಕ-30-10-2019 ರಂದು  ಬೆಳಿಗ್ಗೆ 11.30 ಗಂಟೆಯಲ್ಲಿ ಸುಂದರಪಾಳ್ಯಕ್ಕೆ ಹೋಗಿ ಬಜಾರು ರಸ್ತೆಯಲ್ಲಿ ಬಟ್ಟೆ ಅಂಗಡಿ ಬಳಿ ನಿಲ್ಲಿಸಿ ಬೇತಮಂಗಲಕ್ಕೆ ಬಸ್ಸಿನಲ್ಲಿ  ಬಂದು  ನಂತರ ಸಂಜೆ 5.30 ಗಂಟೆಗೆ ಹೋಗಿ ನೋಡಲಾಗಿ  35,000/- ರೂ ಬೆಲೆ ಬಾಳುವ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರವೀಣ್‌ ಕುಮಾರ್‌ ಬಿನ್ ರಮೇಶ್, ಮರವಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 03.12.2019 ರಂದು  ಕೆ.ಎ-08, ವಿ-9936 ಹೋಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ಬಂಗಾರಪೇಟೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಮಂಜುನಾಥ ಮೆಡಿಕಲ್ ಸ್ಟೋರ್ ಬಳಿ ಬೆಳಿಗ್ಗೆ 10-00 ಗಂಟೆಯಲ್ಲಿ ನಿಲ್ಲಿಸಿ ನಂತರ ಮದ್ಯಾಹ್ನ 3-00 ಗಂಟೆಗೆ ಬಂದು ನೋಡಿದಾಗ 40,000/- ರೂ ಬೆಲೆ ಬಾಳುವ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಹನುಮಂತರೆಡ್ಡಿ ಬಿನ್ ಗಂಗಿರೆಡ್ಡಿ, ಸುರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 04.12.2019 ರಂದು ಬೆಳಿಗ್ಗೆ 9:00 ಗಂಟೆಗೆ TVS HEAVY DUTY REG NO.KA08-K-1530 ರಲ್ಲಿ ಸೂರಜ್ ಮಲ್ ವೃತ್ತದ ಬಳಿ ಗಾಂಧಿ ವೃತ್ತದ ಕಡೆ ಹೊರಟಾಗ ಎಸ್.ಬಿ.ಎಂ ಬ್ಯಾಂಕ್ ಮುಂದೆ ನಿಲ್ಲಿಸಿದ್ದ TIPPER LORRY REG NO-KA 53-D 7864 ವಾಹನದ ಚಾಲಕ ನವೀನ್ ಎಂಬುವನು ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಸಿಗ್ನಲ್ ಬಳಿ ವಾಹನ ಚಲಾಯಿಸಿ  ಮುಂದೆ ಹೋಗುತ್ತಿದ್ದ ಹನುಮಂತರೆಡ್ಡಿ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಹನುಮಂತರೆಡ್ಡಿ ರವರಿಗೆ ರಕ್ತಗಾಯವಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಧಾಕರ್‌ ಬಿನ್ ರಾಮಚಂದ್ರಪ್ಪ, ಬಾವರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 04.12.2019 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರವಾಹನ  ಸಂಖ್ಯೆ ಕೆಎ-08-ಎಸ್-5391 ರ ಹಿಂಬದಿಯಲ್ಲಿ ಬಾಬು ಎಂಬುವರನ್ನು ಕುಳ್ಳರಿಸಿಕೊಂಡು ಬಾವರಹಳ್ಳಿಯಿಂದ ಸಂಪಂಗಿಪುರ ಸಮೀಪ ರಸ್ತೆಯಲ್ಲಿ ಬರುತ್ತಿದ್ದಾಗ, ಸಂಪಂಗಿಪುರ ಅಡ್ಡರಸ್ತೆಯಲ್ಲಿ ಟಾಟಾಸುಮೋ ವಾಹನ ಸಂಖ್ಯೆ ಕೆಎ-04-ಎ-4299 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ, ದೂರುದಾರರು ಮತ್ತು ಬಾಬು ಇಬ್ಬರೂ ವಾಹನ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

 – ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಭಾರತೀ ಬಾಯಿ ಕೊಂ ನಾಗೇಶ್‌ ರಾವ್‌, ಕೊಲಮೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಮಗಳಾದ ಕು.ಲತಾಬಾಯಿ 19 ವರ್ಷ ರವರು ದಿನಾಂಕ 03.12.2019 ರಂದು ರಾತ್ರಿ 7-30 ಗಂಟೆಗೆ ಮನೆಯಿಂದ ಹೊರಗೆ ಹೋದವಳು ಪುನ: ಮನೆಗೆ ವಾಪಸ್ ಬಾರದೇ  ಕಾಣೆಯಾಗಿರುತ್ತಾಳೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ಹುಸೇನ್‌ ಬಿನ್ ಅಕ್ಬರ್‌ ಸಾಬ್‌, ಪದ್ಮಘಟ್ಟ ಗ್ರಾಮ, ಮುಳಬಾಗಿಲು ತಾಲ್ಲೂಕು ರವರ ತಂಗಿ ಪರ್ಹಾನಾ ತಾಜ್, 24 ವರ್ಷ ರವರನ್ನು ಆರು ವರ್ಷಗಳ ಹಿಂದೆ ಸೂಲಿಕುಂಟೆ ಗ್ರಾಮದ ವಾಸಿಯಾದ ಯಾರಬ್ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಪರ್ಹಾನಾ ತಾಜ್ ರವರಿಗೆ ಮೂರು ವರ್ಷಗಳಿಂದ ಹೊಟ್ಟೇನೋವು ಬರುತ್ತಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04.12.2019 ರಂದು ಮದ್ಯಾಹ್ನ 2.45 ಗಂಟೆಯಲ್ಲಿ ಮನೆಯ ಬೆಡ್ ರೂಂ ನಲ್ಲಿ ಫ್ಯಾನಿಗೆ ಓಣಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *