ದಿನದ ಅಪರಾಧಗಳ ಪಕ್ಷನೋಟ 03ನೇ ಡಿಸೆಂಬರ್‌ 2019

 

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕುಮಾರ್‌ ಬಿನ್ ಆರ್‍ಮುಗಂ, ಪಲರೇವುಗಡ್ಡ ಗ್ರಾಮ, ಕುಪ್ಪಂ ತಾಲ್ಲೂಕು, ಆಂದ್ರಪ್ರದೇಶ ರವರ ತಮ್ಮ ಸುಂದರ್ ರವರು ದಿನಾಂಕ 01-12-2019 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಪಲ್ಸರ್  ದ್ವಿಚಕ್ರ ವಾಹನ  ಸಂಖ್ಯೆ ಕೆ.ಎ.02ಹೆಚ್.ಎಂ-7341 ರಲ್ಲಿ ಕುಪ್ಪಂ-ವಿ ಕೋಟೆ ಮುಖ್ಯರಸ್ತೆ  ಪಂಥನಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ, ವಿ.ಕೋಟೆ ಕಡೆಯಿಂದ ಕಾರ್ ಸಂಖ್ಯೆ ಕೆ.ಎ-03-ಎಂ.ಜಿ-6435ರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಂದರ್ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಕ್ತಗಾಯಗಳಾಗಿರುತ್ತೆ.

 

– ಹಲ್ಲೆ : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕು|| ಸ್ವಾತಿ ಬಿನ್ ಮುನಿವೆಂಕಟಪ್ಪ, ಭೋಯಿಸೊನ್ನೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಕೇತಗಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 27.11.2019 ರಂದು ಬೆಳಿಗ್ಗೆ 11.45 ಗಂಟೆಯಲ್ಲಿ ಶಿಕ್ಷಕಿ ಮಂಜುಳಬಾಯಿ ರವರು ಸಮಾಜ ಪ್ರಶ್ನೆಗಳನ್ನು ಓದಿ ಉತ್ತರ ಹೇಳಬೇಕೆಂದು ಹೇಳಿದಾಗ, ದೂರುದಾರರು ನೀವು ನೆನ್ನೆ ಕನ್ನಡ ಪುಸ್ತಕ ತರಲು ಹೇಳಿದ್ದಿರಿ ಎಂದು ಕೇಳಿದಾಗ ಮಂಜುಳಾಬಾಯಿ ರವರು ನೀನು ವಿಚಿತ್ರವಾಗಿ ಆಡುತ್ತಿಯಾ ಎಂದು ಕೈಯಲ್ಲಿದ್ದ ಪುಸ್ತಕದಿಂದ ದೂರುದಾರರ ಬಲಕಿವಿಯ ಬಳಿ ಹೊಡೆದಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾಗರತ್ನಮ್ಮ ಕೊಂ ಶ್ರೀನಿವಾಸಪ್ಪ, ಚಿಕ್ಕಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 02.12.2019 ರಂದು ಸಂಜೆ 4-00 ಗಂಟೆಯಲ್ಲಿ ಮನೆಯಲ್ಲಿದ್ದಾಗ ಗಂಡ ಶ್ರೀನಿವಾಸಪ್ಪ, ನೀಲಮ್ಮ, ಲಕ್ಷ್ಮೀದೇವಿ ಮತ್ತು ಆಶಾ ರವರು ಆಸ್ತಿಯ ವಿಚಾರದಲ್ಲಿ ದೂರುದಾರರೊಂದಿಗೆ ಜಗಳ ತೆಗೆದು ಕೈಗಳಿಂದ ಹೊಡೆದಿದ್ದು, ಜಗಳ ಬಿಡಿಸಲು ಬಂದ ಜಗದೀಶ ರವರನ್ನು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ವೀಣಾ ಕೊಂ ದಾನೇಶ್ವರನ್‌, ಮೆಷಿನರಿ ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎಫ್ ರವರ ಮಗಳಾದ ಕು||ಕೀರ್ತನಾ, 19 ವರ್ಷ ರವರು ದಿನಾಂಕ 01.12.2019 ರಂದು ಸಂಜೆ 7.30 ಗಂಟೆಯಲ್ಲಿ ನೀರನ್ನು ತೆಗೆದುಕೊಂದು ಬರುವುದಾಗಿ ಮನೆಯಲ್ಲಿರುವ ಹೊಂಡಾ ಅಕ್ಟಿವ್ ದ್ವಿಚಕ್ರ ವಾಹನ ಸಂಖ್ಯೆ KA08-W-9099 ನ್ನು ತೆಗೆದುಕೊಂಡು ಹೋದವಳು  ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *