ದಿನದ ಅಪರಾದಗಳ ಪಕ್ಷಿನೋಟ 22 ನೇ ಏಪ್ರಿಲ್‌ 2018

– ರಸ್ತೆ ಅಪಘಾತಗಳು :‍ 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಜಯ್‌ಕುಮಾರ್ ಬಿನ್ ಕೃಷ್ಣಪ್ಪ, ಮಾದಿಗರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ,  ದಿನಾಂಕ 20.04.2018 ರಂದು ರಾತ್ರಿ 10.30 ಗಂಟೆಯಲ್ಲಿ ದ್ವಿಚಕ್ರವಾಹನ ಸಂಖ್ಯೆ ಕೆಎ-08-ಎಲ್-9015 ರ ಸವಾರನಾದ  ಶ್ರೀನಿವಾಸ್, 40 ವರ್ಷ, ದೊಡ್ಡಅಂಕಾಡಹಳ್ಳಿ ಗ್ರಾಮ ರವರು   ಹೊಸೂರು- ಸಿದ್ದನಹಳ್ಳಿ ರಸ್ತೆಯ ಮಧ್ಯೆ ದ್ವಿಚಕ್ರವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಶ್ರೀನಿವಾಸ್ ರವರು ದ್ವಿಚಕ್ರವಾಹನದ ಸಮೇತ ಕೆಳಗೆ ಬಿದ್ದು ತಲೆಗೆ ತೀವ್ರ ಸ್ವರೂಪ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ  ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಕುಲ್ ಬಿನ್ ಮುನಿಕೃಷ್ಣಪ್ಪ, 35  ವರ್ಷ, ಘಟ್ಟಕಾಮದೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಅಕ್ಕನ ಮಗಳು ಕುಮಾರಿ ರಕ್ಷಿತಾ ಎಂಬಾಕೆಯು ದಿನಾಂಕ.20.04.2018 ರಂದು ಮದ್ಯಾಹ್ನ 12.00 ಗಂಟೆಯಲ್ಲಿ ಅದೇ ಗ್ರಾಮದ ಸ್ನೇಹಿತೆ ಸಂಧ್ಯಾ ಎಂಬಾಕೆಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಪುನ: ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.

– ಹಲ್ಲೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.21.04.2018 ರಂದು  ದೂರುದಾರರಾದ ಶ್ರೀ. ರೂಪ್‌ ಬಿನ್‌ ಮಹ್ಮದ್‌ ಸೂಕಾರ್‌ ಅಲ್ಲಿ ವಿವೇಕನಗರ ರವರು ನೀಡಿದ ದೂರಿನಲ್ಲಿ ದೂರುದಾರರ ಅಣ್ಣನ ಮಗನಾದ ಮಾಬುದ್ದೀನ್ ರವರೊಂದಿಗೆ ರೆಡ್ಡಿ ಕಲ್ಯಾಣ ಮಂಟಪದ ಎದುರು ಇರುವ ದೂರುದರರು  ಮನೆಯಲ್ಲಿ ಇದ್ದಾಗ , ಆರೋಪಿ ಮೆಲ್ವಿನ್ ಏಕಾಎಕಿ ದೂರುದಾರರ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು  ವಿನಾ ಕಾರಣ ಗಲಾಟೆ ಮಾಡಿ ಹೊಡೆದು ರಕ್ತ ಗಾಯಪಡೆಸಿರುತ್ತಾರೆ.

Leave a Reply

Your email address will not be published. Required fields are marked *