ದಿನದ ಅಪರಾದಗಳ ಪಕ್ಷಿನೋಟ 08 ನೇ ಜನವರಿ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 07.01.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಅಸ್ವಾಭಾವಿಕ ಮರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-07.01.2018 ರಂದು ದೂರುದಾರರಾದ ಶ್ರೀ. ನಾಗಪ್ಪ ಬಿನ್‌ ವೆಂಕಟಸ್ವಾಮಿ, ಮುದ್ದೇಗೌಡನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:31.12.2017 ರಂದು ಗ್ರಾಮದಿಂದ ಬಟುವಾರಹಳ್ಳಿಗೆ ಹೋಗುವ ರಸ್ತೆಯಲ್ಲಿ ಯಾರೋ ಒಬ್ಬ ಅನಾಮದೇಯ ವ್ಯಕ್ತಿ ಯಾವುದೋ ವಿಷ ಸೇವನೆ ಮಾಡಿ ಒದ್ದಾಡುತ್ತಿರುವುದಾಗಿ ತಿಳಿದಿದ್ದು, ಅವರು ಕೂಡಲೇ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ ವಯಸ್ಸು ಸುಮಾರು 50 ವರ್ಷ. ರವರು ವಿಷ ಸೇವನೆ ಮಾಡಿ ರಸ್ತೆಯಲ್ಲಿ ಒದ್ದಾಡುತ್ತಿದ್ದವರನ್ನು  ಕೂಡಲೆ 108 ಆಂಬ್ಯೂಲೆನ್ಸ್ ವಾಹನಕ್ಕೆ ಕರೆಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಆತನನ್ನು ಚಿಕಿತ್ಸೆಗಾಗಿ ಕೆ.ಜಿ.ಎಪ್. ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದರಿ ಅನಾಮದೇಯ ವ್ಯಕ್ತಿಯು ಚಿಕಿತ್ಸೆಯಿಂದ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಆತನ ವಾರಸುದಾರರ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿರುತ್ತಾರೆ.

Leave a Reply

Your email address will not be published. Required fields are marked *