ದಿನದ ಅಪರಾದಗಳ ಪಕ್ಷಿನೋಟ 02ನೇ ನವೆಂಬರ್‌ 2019

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರತ್ತದೆ. ದೂರುದಾರರಾದ ಶ್ರೀಮತಿ. ಮುನಿವೆಂಕಟಮ್ಮ, ಸೋರೇಗೌಡನಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಮಗ ರಾಜೇಶ್‌ ರವರೊಂದಿಗೆ ದಿನಾಂಕ 30.10.2019 ರಂದು ಸಂಜೆ ದೂರುದಾರರ ಗಂಡ ರಮೇಶ್‌ ರವರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಪ್ಯಾಕ್ಟರಿ ಬಳಿ ಹೋಗಿ, ರಮೇಶ ರವರನ್ನು  ಕಾಲೇಜ್ ಫೀಸ್‌ ಕಟ್ಟಲು ಹಣವನ್ನು ಕೇಳಿದಾಗ, ರಮೇಶ ಜಗಳ ಮಾಡಿ, ಮನೆಗೆ ಬಾರದೇ ಆತನ ತಾಯಿಯ ಮನೆಯಾದ ಐತಾಂಡಹಳ್ಳಿಗೆ ಹೋಗಿದ್ದು, ದಿನಾಂಕ 31.10.2019 ರಂದು ಬೆಳಿಗ್ಗೆ 10.00 ಗಂಟೆಗೆ ರಮೇಶ ರವರು ಮನೆಗೆ ವಾಪಸ್ಸು ಬಂದಾಗ, ಆತನ ಭಾವ ನಾರಾಯಣಸ್ವಾಮಿ ಮತ್ತು ರಂಗಪ್ಪ ಬುದ್ದಿವಾದ ಹೇಳಿದ್ದು, ರಮೇಶ ಒಪ್ಪಿಕೊಂಡು ಮನೆಯಿಂದ ಹೋದವನು, ಐತಾಂಡಹಳ್ಳಿ ಕೆರೆ ಬಳಿ ಇರುವ ಒಂದು ಹುಣಸೆ ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

Leave a Reply

Your email address will not be published. Required fields are marked *