ದಿನದ ಅಪರಾದಗಳ ಪಕ್ಷಿನೋಟ 01ನೇ ನವೆಂಬರ್‌ 2019

– ಅಪಹರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗುರು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಶ್ರೀ. ರಾಜೇಶ್ , ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಮಸ್ಕಂ, ಕೆ.ಜಿ.ಎಫ್ ರವರು ಬೆಂಗಳೂರು ಬಾಲಮಂದಿರದಿಂದ ಪಾಲನೆ, ಪೋಷಣೆ ಮತ್ತು ರಕ್ಷಣೆಯ ಹಿತದೃಷ್ಠಿಯಿಂದ ರಮೇಶ್ ಬಿನ್ ರಾಮ 15 ವರ್ಷ ಹಾಗೂ ಅತೀಕ್ ಖಾನ್ ಬಿನ್ ಅಬೂಬ್ಕರ್ 13 ವರ್ಷ ಎಂಬುವರನ್ನು ದಿನಾಂಕ 16.05.2014 ರಂದು ಬೆಂಗಳೂರು ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಸರ್ಕಾರಿ ಬಾಲಕರ ಬಾಲಮಂದಿರ, ಮಸ್ಕಂ, ಕೆ.ಜಿ.ಎಫ್ ಸಂಸ್ಥೆಯಲ್ಲಿ ದಾಖಲಾಗಿರುತ್ತಾರೆಂದೂ ಅಂದಿನಿಂದ ಸದರಿ ರಮೇಶ್ ಮತ್ತು ಅತೀಕ್ ಖಾನ್ ರವರು ತಮ್ಮ ಸಂಸ್ಥೆಯಲ್ಲಿ ವಾಸವಾಗಿದ್ದುಕೊಂಡು, ರಮೇಶ್ ರವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲೋಯರ್ ಮಸ್ಕಂ, ಆಂಡ್ರಸನ್ ಪೇಟೆ ಶಾಲೆಯಲ್ಲಿ 7ನೇ ತರಗತಿಯಲ್ಲಿ ಹಾಗೂ ಅತೀಕ್ ಖಾನ್ ರವರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ರಾಬರ್ಟ್ ಸನ್ ಕೆ.ಜಿ.ಎಫ್ ನಲ್ಲಿ 08ನೇತರಗತಿ ವ್ಯಾಸಂಗ ಮಾಡುತ್ತಿದ್ದರು, ದಿನಾಂಕ:-29.10.2019 ರಂದು ದೀಪಾವಳಿ ಹಬ್ಬದ ಪ್ರಯುಕ್ತ ಮಧ್ಯಾಹ್ನ 12.30 ಗಂಟೆಯಿಂದ ಮದ್ಯಾಹ್ನ 1.00 ಗಂಟೆಯ ಮದ್ಯೆ ಸಂಸ್ಥೆಯ ಆವರಣದಲ್ಲಿ ಆಟವಾಡಿಕೊಂಡಿದ್ದ ರಮೇಶ್ ಮತ್ತು ಅತೀಕ್ ಖಾನ್ ರವರನ್ನು ಯಾರೋ ವ್ಯಕ್ತಿಗಳು ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿರುತ್ತಾರೆಂದೂ ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *