ಉರಿಗಾಂ ವೃತ್ತ ಪೊಲೀಸರಿಂದ ಕನ್ನಕಳವು ಆರೋಪಿಯ ಬಂಧನ ಮಾಲು ವಶ

ಕೆಜಿಎಫ್., ನ. ೧೫ :

ಉರಿಗಾಂ ವೃತ್ತ ಪೊಲೀಸರಿಂದ ಕನ್ನ ಕಳವು ಆರೋಪಿಯನ್ನು ಬಂಧಿಸಿ, ಒಂದೂವರೇ ಲಕ್ಷ ರೂಪಾಯಿ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶ್‌ಕುಮಾರ್ ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯ ವಿವಿದೆಡೆಗಳಲ್ಲಿ ಮನೆ ಕಳವು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕಳವು ಮಾಲು ಮತ್ತು ಕಳವು ಮಾಡಿದ ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಉರಿಗಾಂ ಸಿಪಿಐ ಎಂ.ಸೂರ್ಯಪ್ರಕಾಶ್ ರವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.

ವಿಶೇಷ ಅಪರಾಧ ವಿಭಾಗದ ಪೊಲೀಸರು ಕೆಜಿಎಫ್‌ನ ಆಂಡ್ರಸನ್‌ಪೇಟೆ ೨ನೇ ಬ್ಲಾಕ್ ಜನತಾ ಕಾಲೋನಿ ನಿವಾಸಿ ರಾಜೇಶ್‌ಕುಮಾರ್ @ ಮೂನು ಪಿಳ್ಳೈ ಬಿನ್ ಸೆಲ್ವಕುಮಾರ್ (ಸುಮಾರು ೨೫ ವರ್ಷ) ಎಂಬುವನನ್ನು ದಸ್ತಗಿರಿ ಮಾಡಿ ಆರೋಪಿಯಿಂದ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕಳುವಾಗಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಒಟ್ಟು ಸುಮಾರು ೧,೫೦,೦೦೦/- ರೂಗಳ ಬೆಲೆ ಬಾಳುವುದನ್ನು ವಶಪಡಿಸಿಕೊಳ್ಳಲಾಯಿತು.

ಆರೋಪಿಯನ್ನು ಬಂಧಿಸಿ, ಮಾಲು ವಶಪಡಿಸಿಕೊಳ್ಳುವಲ್ಲಿ ಉರಿಗಾಂ ಸಿಪಿಐ ಎಂ.ಸೂರ್ಯಪ್ರಕಾಶ್ ನೇತೃತ್ವದ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳು ಇ.ರಮೇಶ್, ಆರ್. ಗಜೇಂದ್ರ, ಬಿ.ವಿ. ವೆಂಕಟೇಶಪ್ಪ, ಶ್ರೀನಿವಾಸ್, ಚಂದ್ರಶೇಖರ್, ಸುನೀಲ್‌ಕುಮಾರ್, ಮಹೇಂದ್ರ ಕುಮಾರ್ ಇತರರು ಸಹಕರಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶ್‌ಕುಮಾರ್ ಅವರು ತಿಳಿಸಿದರು.

Leave a Reply

Your email address will not be published. Required fields are marked *